Wednesday, April 14, 2010

ಬಿಸಿಲೆ ಎಂಬ ಸುಂದರ ತಾಣ





ಪ್ರಾಕೃತಿಕ ಸಂಪತ್ತನ್ನು ಹೊದ್ದು ಹಾಸಿ ಮಲಗಿರುವಂತಹ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸಕಲೇಶಪುರ ತಾಲ್ಲೂಕು ಬಹಳ ಪ್ರಮುಖವಾದುದು. ಈ ತಾಲ್ಲೂಕಿನಲ್ಲಿ ಪ್ರಾವಾಸಿಗರು ನೋಡಬಹುದಾದಂತಹ ಹಲವಾರು ತಾಣಗಳು ಸಿಗುತ್ತವೆ, ಅಪರೂಪದ ಸಸ್ಯ ಸಂಪತ್ತಿದೆ, ಅಳಿವಿನಂಚಿನಲ್ಲಿರುವ ಪ್ರಾಣಿ ಸಂಕುಲಗಳಿವೆ. ಕಾಫಿ, ಏಲಕ್ಕಿ ತೋಟಗಳು ಹಸಿರಿನಿಂದ ಕಂಗೊಳಿಸುವ ಗದ್ದೆಗಳ ಸಾಲು, ಅಲ್ಲಲ್ಲಿ ಹರಿಯುವ ಜರಿ, ತೊರೆಗಳು, ಬೆಟ್ಟ ಗುಡ್ದಗಳು ನಿಮ್ಮನ್ನು ಕೈ ಬೀಸಿ ಸ್ವಾಗತಿಸುತ್ತವೆ. ಇಂತಹ ಮಲೆನಾಡಿನಲ್ಲಿ ಹಾಸನ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಂತೆ ಬಿಸಿಲೆ ಎಂಬ ಸುಂದರ ತಾಣವೂ ಇದೆ.

ಬಿಸಿಲೆ ಸಕಲೇಶವುರದಿಂದ ಸುಮಾರು ೫೦ ಕಿ.ಮಿ. ದೂರದಲ್ಲಿದೆ. ಇದು ಅಪರೂಪದ ಪ್ರಾಣಿ ಸಂಕುಲ ಹಾಗೂ ಸಸ್ಯ ಸಂಕುಲಗಳನ್ನು ಹೊಂದಿರುವ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುವಂತಹ ಪ್ರದೇಶವಾಗಿದ್ದು ಪ್ರಕೃತಿ ಪ್ರಿಯರಿಗೆ,ಸುಮಾರು 3640 ಹೆಕ್ಟೇರ್ ನಷ್ಟು ವಿಸ್ತಾರವಾದ ಕಾಡನ್ನು ಹೊಂದಿದ್ದು ಸುತ್ತಲೂ ಕುಮಾರಧಾರ ಪರ್ವತ , ಪಟ್ಲ ಬೆಟ್ಟ ಹಾಗೂ ಇತರ ಬೆಟ್ಟಗಳನ್ನು ಏಕ ಕಾಲದಲ್ಲಿ ವಿಕ್ಷಿಸಬಹುದಾದ ಸುಂದರ ರಮಣೀಯ ಸ್ತಳವಾಗಿದೆ,
ಮಾಡಿಸಿದಂತಹ ಸ್ಥಳವಾಗಿದ್ದು ಇಲ್ಲಿ ಪ್ರಕೃತಿಯ ಸೊಬಗನ್ನು ಸವಿಯಲು ಅರಣ್ಯ ಇಲಾಖೆಯ ವತಿಯಿಂದ ಅನುಕೂಲ ಮಾಡಿದ್ದು ಮೇಲಿನಿಂದ ನಿಂತು ಸುಮಾರು ೫೦೦೦ ಅಡಿಗಳ ಆಳದಲ್ಲಿ ಇರುವಂತಹ ವನಗಳ ರಾಶಿಯ ಸೊಬಗನ್ನು ಅದರ ಮಧ್ಯದಲ್ಲಿ ದುಮ್ಮಿಕ್ಕಿ ಹರಿಯುವ ನದಿಯನ್ನೂ ಸುತ್ತ ಮುತ್ತಲಿನ ಬೆಟ್ಟಗಳನ್ನೂ (ಕುಮಾರದಾರ ಪರ್ವತ ಅಥವಾ ಪುಷ್ಪಗಿರಿ ಪರ್ವತವನ್ನೂ) ಚಲಿಸುವ ಮೋಡಗಳನ್ನೂ, ಸಂಜೆಯ ಹೊತ್ತಿನಲ್ಲಿ ಸೂರ್ಯಸ್ಥವನ್ನು ನೋಡಲು ಎಂತಹವರಿಗೂ ಆನಂದವಾಗುತ್ತದೆ. ಇದನ್ನು ಬರವಣಿಗೆಯಲ್ಲಿ ವರ್ಣಿಸುವುದಕ್ಕಿಂತ ಅನುಭವಿಸಿಯೇ ತೀರಬೇಕು. ಇಲ್ಲಿ ಮಳೆಗಾಳದಲ್ಲಿ ಧಾರಕಾರವಾಗಿ ಸುರಿಯುವ ಮಳೆಯನ್ನು ಹಾಗೂ ಸಂಪೂರ್ಣವಾಗಿ ಮಂಜಿನಿಂದ ಆವೃತ್ತವಾದ ಪ್ರದೇಶಗಳನ್ನು ನೋಡುವುದೇ ಆನಂದ.ಇಲ್ಲಿಂದ ಮುಂದೆ ಸುಮಾರು ೨೦ ಕಿ.ಮೀ. ಕ್ರಮಿಸಿದರೆ ಕುಕ್ಕೆ ಸುಬ್ರಹ್ಮಣ್ಯ ಸಿಗುತ್ತದೆ, ಚಾರ್ಮುಡಿ ಘಾಟಿಯಂತೆ ಬಿಸಿಲೆ ಘಾಟಿಯೂ ದುರ್ಗಮವಾದ ರಸ್ತೆಯಾಗಿದ್ದು ಹಲವಾರು ಮೈ ನವಿರೇಳಿಸುವ ತಿರುವುಗಳನ್ನು ಒಳಗೊಂಡಿದೆ. ಈ ರಸ್ತೆಯಲ್ಲಿ ಪ್ರಯಾಣಿಸುವುದೇ ಅನುಭವ.ಇಲ್ಲಿಗೆ ಸಕಲೇಶಪುರದಿಂದ ಹೆತ್ತೂರು, ವನಗೂರು ಕೂಡುರಸ್ತೆಯ ಮಾರ್ಗವಾಗಿ ಹೋಗಬೇಕಾಗುತ್ತದೆ. ವಾಸ್ತವ್ಯಕ್ಕೆ ವನಗೂರು-ಕೂಡುರಸ್ತಯಲ್ಲೇ ಎಲ್ಲಾ ರೀತಿಯ ಸೌಕರ್ಯವಿರುವಂತಹ ಖಾಸಗಿ ವಸತಿಗೃಹವಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಮಾಡಬಹುದಾಗಿದೆ.
ದರ ಸುತ್ತ ಮುತ್ತ ಹಲವಾರು ನೋಡುವಂತಹ ಸ್ಥಳಗಳಿದ್ದು ವನಗೂರು-ಕೂಡರಸ್ತೆಯಿಂದ ಗೈಡ್ ನ ಸಹಾಯವನ್ನು ಪಡೆದು ಮಲ್ಲಹಳ್ಳಿ ಜಲಪಾತ, ಕಾಗಿನಹರೆ, ಪಟ್ಲ ಬೆಟ್ಟ , ಮುಕನಮನೆ ಫಾಲ್ಸ್, ಗವಿ ಬೆಟ್ಟ ಮುಂತಾದ ಸ್ಥಳಗಳನ್ನು ವೀಕ್ಷೀಸಬಹುದಾಗಿದೆ. ಇಲ್ಲಿಗೆ ಸ್ವಂತ ವಾಹನದಲ್ಲಿ ಪ್ರವಾಸ ಕೈಗೊಂಡರೆ ಉತ್ತಮ ಸಾಧ್ಯವಾಗದಿದ್ದರೆ ವನಗೂರು-ಕೂಡರಸ್ತೆವರೆಗೂ ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ ಆಗಮಿಸಿ ಅಲ್ಲಿಂದ ಜೀಪ್ ಅಥವಾ ಕಾರನ್ನುಬಾಡಿಗೆ ಪಡೆದು ಪ್ರವಾಸ ಕೈಗೊಳ್ಳಬಹುದು
.
ಪ್ರಿಯರಿಗೆ ಟ್ರಕ್ಕಿಂಗ್ ಮಾನ್ಸೂನ್ ಟ್ರಕ್ಕಿಂಗ್ ಮಾಡಲು ಹೇಳತಹ ಸ್ಥಳವಾಗಿದ್ದು ಪ್ರಾಕೃತಿಕ ಸೌಂದರ್ಯವನ್ನು ಎಷ್ಟು ಬೇಕೂ ಅಷ್ಟು ಸವಿಯಬಹುದು. ಸಾಧ್ಯವಾದರೆ ಗೆಳೆಯರೊಂದಿಗೆ ಅಥವಾ ನಿಮ್ಮ ಕುಟುಂಬದೊಂದಿಗೆ ಮನಸ್ಸಿನಲ್ಲಿರುವ ಜಂಜಡಗಳನ್ನು ಮರೆತು ವಾರಾಂತ್ಯವನ್ನು ಈ ಸುಂದರ ತಾಣದಲ್ಲಿ ಕಳೆಯಿರಿ.

Wednesday, December 16, 2009

ನಮ್ಮ ಮಂಜ್ರಾಬಾದ್ ಕೋಟೆ


ಪಶ್ಚಿಮ ಘಟ್ಟಗಳ ಬಹುಮುಖ್ಯ ಭಾಗವಾಗಿರುವ ಸಕೇಲೇಶಪುರ ತಾಲ್ಲೂಕು ಪ್ರಕೃತಿ ಸೌಂದರ್ಯಕ್ಕೆ ಹೆಸರಾದುದು ಇದು ಕರ್ನಾಟಕ ಸ್ವಿಡ್ಜರ್ಲ್ಯಾಂಡ್ ಎಂದೇ ಪ್ರಸಿದ್ದಿ ಜೊತೆಗೆ ತನ್ನದೇ ಆದ ಐತಿಹಾಸಿಕ ಪರಂಪರೆಯನ್ನು ಹೊಂದಿದೆ ಇಲ್ಲಿ ಹಲವಾರು ಪಾಳೆಗಾರರು ಆಳ್ವಿಕೆ ನೆಡೆಸಿದ್ದಾರೆ, ಜೊತೆಗೆ ಕೋಟೆಗಳನ್ನು ನಿರ್ಮಿಸಿ ಸಾಮ್ರಾಜ್ಯ ಸ್ಥಾಪಿಸಿದ ಕುರುಹುಗಳನ್ನೂ ಬಿಟ್ಟಿದ್ದಾರೆ. ಇವುಗಳಲ್ಲಿ ಮುಖ್ಯವಾಗಿ ಮುಂಜ್ರಾಬಾದ್ ಕೋಟೆ ಬಹು ಬೇಗನೆ ನೆನಪಿಗೆ ಬರುತ್ತದೆ.



ಈ ಮಂಜ್ರಾಬಾದ್ ಕೋಟೆ ಬೆಂಗಳೂರಿನಿಂದ ಮಂಗಳೂರಿನ ಕಡೆಗೆ ಹೋಗುವ ರಾಷ್ತ್ರೀಯ ಹೆದ್ದಾರಿಯಲ್ಲಿ ಸಕಲೇಶಪುರದಿಂದ ಐದು ಕಿಮೀ. ಮುಂದೆ ದೊಣಿಗಲ್ ಎಂಬ ಸ್ಥಳದಲ್ಲಿ ಇದೆ. ಈ ಕೋಟೆಯ ಒಂದು ಗುಡ್ಡದ ಮೇಲೆ ನಿರ್ಮಿಸಲಾಗಿದ್ದು ಇದನ್ನು ಆಡಾಣಿ ಗುಡ್ಡ ಎಂದು ಕರೆಯುತ್ತಿದ್ದರು. ಕೋಟೆಯನ್ನು ನಿರ್ಮಿಸಿದ ಮೇಲೆ ಕಾಲಕ್ರಮೇಣ ಆಡಾಣಿ ಗುಡ್ಡ ಹೆಸರು ಕಣ್ಮರೆಯಾಗಿದೆ. ಸಕಲೇಶಪುರದ ಮೂಲ ಹೆಸರು ಕಣ್ಮರೆಯಾಗಿದೆ. ಸಕಲೇಶಪುರದ ಮೂಲ ಹೆಸರು ಮಂಜ್ರಾಬಾದ್ ಎಂದಿತ್ತು. ಈ ಪ್ರದೇಶದಲ್ಲಿ ಕೋಟೆಯನ್ನು ನಿರ್ಮಿಸಿದ ಕಾರಣ ಈ ಸ್ಥಳದ ಹೆಸರನ್ನೇ ಕೋಟೆಗೆ ಇಡಲಾಗಿದೆ. ಮಂಜರಬಾದ್ ಎಂಬುದು ಅರಬ್ಬಿ ಭಾಷೆಯ ಮಂಜರ್ ಮತ್ತು ಅಬಾದ್ ಎಂಬ ಪದದಿಂದ ಬಂದಿದೆ ಎನ್ನಲಾಗಿದೆ. ಮಂಜರ್ ಎಂದರೆ ರಮಣೀಯ. ನೋಟಕ್ಕೆ ಆಶಯ ಎಂದೂ ಅಬಾದ್ ಎಂದರೆ ನೆಲಸಿದ ಸುಖಕರವಾದ ಎಂಬರ್ಥವಿದ್ದು ಒಟ್ಟಾಗಿ "ಸುಖಕರವಾದ ರಮಣೀಯ ನಾಗರಿಕ ನೆಲೆ" ಎಂಬುದಾಗಿದೆ.

ಈ ಕೋಟೆಯನ್ನು ಕಲ್ಲು ಮತ್ತು ಇಟ್ಟಿಗೆಯಲ್ಲಿ 2 ಹಂತಗಳಲ್ಲಿ ನಿರ್ಮಿಸಿದ್ದು ಮೊದಲ ಹಂತದಲ್ಲಿ ಸುಮಾರು ೧೨ ಅಡಿಗಳ ಎತ್ತರದ ಗೋಡೆಯನ್ನು ಕಲ್ಲಿನಿಂದ ನಿರ್ಮಿಸಲಾಗಿದೆ. ಇಲ್ಲಿ ಎರಡನೇ ಹಂತದಲ್ಲಿ ಇಟ್ಟಿಗೆಯಿಂದ ನಿರ್ಮಿಸಲಾಗಿದೆ. ಇಲ್ಲಿ ಮೊದಲ ಹಂತವನ್ನು ಸ್ಥಳಿಯ ಪಾಳೇಗಾರರಾದ ಐಗೂರು ನಾಯಕರು(ಬಲಂ ನಾಯಕರು) ನಿರ್ಮಿಸಿರಬಹುದೆಂದು ಊಹಿಸಲಾಗಿದೆ. ನಂತರ ಇವರಿಂದ ಟಿಪ್ಪು ಸುಲ್ತಾನ್ ತನ್ನ ಸಾಮ್ರಾಜ್ಯವನ್ನು ಶ್ರೀರಂಗಪಟ್ಟಣದಿ೦ದ ಮಂಗಳೂರಿನವರೆಗೂ ವಿಸ್ತರಿಸಿದಾಗ ಅದ್ನ್ನು ಮಧ್ಯದಲ್ಲಿ ವಿಶ್ರಾಂತಿಗಾಗಿ ಹಾಗೂ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ ಸಲುವಾಗಿ ನಿರ್ಮಿಸಿಕೊಂಡಿದ್ದಾನೆ ಎನ್ನಲಾಗಿದೆ.



ಈ ಕೋಟೆಯ ವಿಶಿಷ್ಟ ಶೈಲಿಯ ಹಿಂದೂ ಮುಸ್ಲಿಂ ವಾಸ್ತುವಿನಿಂದ ನಿರ್ಮಿಸಲಾಗಿದೆ. ಇದು ನಕ್ಷತ್ರಾಕಾರದಲ್ಲಿದ್ದು ಅದರ ದ್ವಾರದಲ್ಲಿಯೇ ನಕ್ಷೆಯನ್ನು ಬರೆಸಿದ್ದು ಆ ನಕ್ಷೆಯ ಪ್ರಕಾರವೇ ಕೋಟೆಯನ್ನು ನಿರ್ಮಿಸಿದ್ದಾರೆ. ಇಲ್ಲಿ ಕುದುರೆ ಲಾಯಗಳು, ಪಾಕಶಾಲೆ, ಸೈನಿಕರ ತಂಗುದಾಣಗಳು ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ.
ನಾವು ಈ ಕೋಟೆಯನ್ನು ವೀಕ್ಷಿಸಬೇಕಾದರೆ ರಸ್ತೆಯಿಂದ ಆಡಾಣ್ಫೆ ಗುಡ್ಡಕ್ಕ್ಸೆ ತಲುಪಲು ಸುಮಾರು 500 ಮೀಟರ್ ಮೇಲಕ್ಕೆ ಕಾಲು ಯಾವುದೇರೀತಿಯ ಆಯಾಸವಾಗುವುದಿಲ್ಲ.ಮೇಲಿರಿದ ಮೇಲೆಒಟ್ಟು ಮುರು ಮಹಾ ದ್ವಾರಗಳಿವೆ. ದಾರಿಯಲ್ಲಿ ಕ್ರಮಿಸಿ ಅಲ್ಲಿಂದ 252 ಮೆಟ್ಟಿಲುಗಳನ್ನೇರಿ ಒಳಗೆ ಪ್ರವೇಶಿಸಬೇಕು. ತಂಪಾದ ಗಾಳಿ ಬೀಸುವುದುರಿಂದ ಯಾವುದೆ ರೀತಿಯ ಆಯಾಸವಾಗುವುದಿಲ್ಲ. . ಮೇಲೆರಿದ ಮೇಲೆ ಒಟ್ಟು ಮುರು ಮಾಹಾ ದ್ವಾರಗಳಿವೆ. ,
ಶತ್ರುಸೈನ್ಯದವರು ಸುಲಭವಾಗಿ ಪ್ರವೇಶಿಸದಂತೆ ಪ್ರತಿ ದ್ವಾರವನ್ನು ನಿರ್ಮಿಸಲಾಗಿದ್ದು ಈಗಲು ಸುಸ್ಟಿತಿಯಲ್ಲಿದೆ. ಕೊಟೆಯ ಸುತ್ತಲೂ ಸುಮಾರು ಐವತ್ತು ಅಡಿಯ ಕಾಲುವೆ ತೊಡಿದ್ದು ಶತ್ರುಗಳು ಸುಲಭವಾಗಿ ನುಸುಳದಂತೆ ಮಾಡಲಾಗಿದೆ. ಕೊಟೆಯ ಮಧ್ಯದಲ್ಲಿ ಒ೦ದು 40*40 ಅಡಿ ಅಳತೆಯಕೊಳವನ್ನು ನಿರ್ಮಿಸಿದ್ದು ವಿಶಿಷ್ಕ ರೀತಿಯಲ್ಲಿಗೆ. ಇಲ್ಲಿ ವಿಶಾಲವಾದ ಒಳಾಂಗಣವಿದ್ದು ಕೊಟೆಯ್8 ಭಾಗಗಳಲ್ಲಿ ಸೈನಿಕರು ಮೇಲಿನಿಂದಲೆ ಪಹರೆ ಕಾಯಲು ಅತ್ಯುತ್ಬುತವಾದ ಬುರುಜುಗಳನ್ನು ನಿರ್ಮಿಸಲಾಗಿದ್ದು ಇವುಗಳು ಸುಮಾರು 25 ಅಡಿ ಎತ್ತರದಲ್ಲಿ ಯಾವುದೇ ಕಬ್ಬಿಣದ ಬಳಕೆಯಲ್ಲಿದೆ, ಗೊಡೆಗೆ ಅಂಟಿಸಿದಸ್ಥಿತಿಯಲ್ಲಿರುವುದು ಬಹಳ ವಿಶಿಷ್ಕವಾಗಿವೆ.



ಪ್ರದೇಶವನ್ನು ಪುರಾಣದಲ್ಲಿ ಹಿಮಶೈಲ, ಹಿಮವಾನ್ ಎಂದು ಕರೆಯುತ್ತಿದ್ದರು. ಏಕೆಂದರೆ ಈಪ್ರದೇಶವು ವರ್ಷದ 6-8 ತಿಂಗಳುಗಳಕಾಲಹಿಮಿದಿಂದಲೇಶ್ ಆವೃತವಾಗಿರುತ್ತದೆ. ಈ ಕೋಟೆಯಮೇಲೆ ನಿಂತು ಸುತ್ತಲಿನ ಸೌಂದರ್ಯವನ್ನು ವೀಕ್ಷಿಸುವಾಗ ಪಶ್ಚಿಮ ಘಟ್ಟದ ರಮಣೀಯವಾದ ಬೆಟ್ಟಗುಡ್ಡಗಳ್ಳನ್ನುನಿತ್ಯ ಹರಿದ್ವರ್ಣದ ವನಗಳ ಸಸ್ಯಕಾಶಿಯನ್ನು ಪಚ್ಚಪೈರುಗಳನ್ನು, ಹಿಮದ ನದಿಯನ್ನು ಅದರಲ್ಲು ಮಳೆಗಾಲದ ಸಂದರ್ಭದಲ್ಲಿ ಸಂಪೂರ್ಣವಾಗಿ ಮಂಜಿನಿಂದ ಆವೃತವಾದಈ ಪ್ರದೇಶವನ್ನು ವರ್ಣಿಸುವುದಕ್ಕಿಂತ ಅನುಭವಿಸಿಯೇ ತೀರಬೇಕು.


ಸುಮಾರು 225 ಕಿ.ಮೀ ದೂರದಲ್ಲಿರುವ ಮಂಜ್ರಾಬಾದ್ ಕೋಟೆಯನ್ನು ಒಮ್ಮೆ ಅದರಲ್ಲೂ ಮಳೆಗಾಲದಲ್ಲಿ ಒ೦ದು ಸುತ್ತು ಹಾಕಿ ಬನ್ನಿ ಜೊತೆಗೆ ಹತ್ತಿರದಲ್ಲೆ ಇರುವ ‘ಬಿಸಿಲೆ’ಎಂಬ ಸುಂದರ ತಾಣವನ್ನು, ಅಗ್ನಿ ಗುಡ್ಡವನ್ನೂ,ಜೇನುಕಲ್ಲು ಬೆಟ್ಟವನ್ನು,ಅಲ್ಲೆಲ್ಲ ಸಿಗುವ ಚಿಕ್ಕ ಜಲಪಾತಹಗಳನ್ನು,(ಎಡೆಕುಮೇರಿ ರೈಲ್ವೆ ಮಾರ್ಗದಲ್ಲಿ) ಕಾಗಿನೆಹರೆಯನ್ನು ಸಾದ್ಯವಾದರೆ ಒಂದು ಟ್ರಕ್ಕಿಂಗ್ ಚಾರಿಣಿ ಮಾಡಿ ಇಂತಹ ಹಲವಾರು ರಮ್ಯತಾಣಗಳಿವೆ ಬನ್ನಿ ನೋಡಿ ಆನಂದಿಸಿ.

Sunday, September 20, 2009

ಗ್ರಾಮೀಣ ಪ್ರದೇಶ ಹಾಗು ಶಿಕ್ಷಣ

ಇಂದಿನ ಸಮಾಜದಲ್ಲಿ ಶಿಕ್ಷಣ ಎಲ್ಲರಿಗೂ ಅತ್ಯವಶ್ಯಕವಾಗಿ ದೊರಕಬೇಕಾಗಿರುವಂತಹ ಒಂದು ಅತ್ಯಮೂಲ್ಯ ವಸ್ತು. ಆದರೆ ಇಂದಿನ ಯುವ ಪೀಳಿಗೆಗೆ ಯಾವ ರೀತಿಯ ಶಿಕ್ಷಣ ಕೊಡಬೇಕೆಂದು ಯಾರಿಗೂ ತಿಳಿಯುತ್ತಿಲ್ಲ, ಸ್ವತಹ ವಿದ್ಯಾರ್ಥಿಗಳಿಗೆ ನಾವು ಏನನ್ನು ಯಾವ ಕಾರಣಕ್ಕಾಗಿ ಓದುತ್ತಿದ್ದೇವೆ ಎಂದು ಮನದಟ್ಟು ಮಾಡಿ ಕೊಳ್ಳಲು ಸಾಧ್ಯವಾಗದ ಈ ಸಂಧಿಗ್ಧ ಪರಿಸ್ಥಿತಿಯಲ್ಲಿ ನಮ್ಮ ವಿದ್ಯಾರ್ಥಿಗಳು ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ, ಅದರಲ್ಲೂ ನಮ್ಮ ಗ್ರಾಮೀಣ ಪರಿಸರದ ಶಿಕ್ಷಣ ವ್ಯವಸ್ತೆ ಅಂತೂ ಜಿಡ್ಡು ಗಟ್ಟಿದ ಯಾವುದೇ ರೀತಿಯ ಚಲನೆಯಲ್ಲಿ ಇಲ್ಲದ ಧುಸ್ತಿತಿಯಲ್ಲಿದೆ ಎಂದು ಹೇಳಲು ವಿಷಾದವಾಗುತ್ತದೆ.
ಇಂದಿನ ವಿಚಾರವಾದಿಗಳೆಂದು (ಬುದ್ದಿಜಿವಿಗಳೆಂದು) ಬೊಗಳೆ ಬಿಡುವ ವ್ಯಕ್ತಿಗಳಿಗೆ ಇಂತಹ ವಿಷಯದ ಬಗ್ಗೆ ಚಿಂತಿಸಲೂ ಸಮಯವಿಲ್ಲ ಅವರದೇನಿದ್ದರೂ ಸೋಗಲಾಡಿತನದ ಕಾರ್ಯಕಸ್ಟೆ ಮೀಸಲು, ಪೋಷಕರಿಗೆ ಅವರದೇ ಅದ ಸಮಸ್ಯೆ, ಹಾಗು ಶಿಕ್ಷಕರಿಗೆ ಅವರ ಸಂಸಾರ ಹಾಗೂ ಬಡ್ಡಿ ವ್ಯವಹಾರದ ಯೋಚನೆ ಹೀಗಿರುವಾಗ ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳ ಬಗ್ಗೆ ಹಾಗೂ ಅವರ ಶಿಕ್ಷಣದ ಬಗ್ಗೆ ಯಾರು ತಾನೆ ಯೋಚಿಸುತ್ತಾರೆ. ಪರಿಸ್ತಿತಿ ಹೀಗಿರುವಾಗ ಉತಾಮ ಸಮಾಜವನ್ನಾದರೂ ಕಟ್ಟುವುದು ಹೇಗೆ ? ವಿದ್ಯಾರ್ಥಿಯ ಆಸಕ್ತಿಯನ್ನು ಪತ್ತೆ ಹಚ್ಚಿ ಅವನಿಗೆ ಬೇಕಾದ ಶಿಕ್ಷಣವನ್ನು ನಿಡುವ ಕಲೆಯನ್ನು ಹೊಂದಿರುವ ಶಿಕ್ಷಕರು ನಮ್ಮಲ್ಲಿ ಎಷ್ಟು ಜನ ಸಿಗುತ್ತಾರೆ? ಎಲ್ಲ್ಲೋ ಬೆರಳೆಣಿಕೆಯಸ್ಟುಜನ ಇದ್ದರೂ ಅವರಿಗೆ ಬೇಕಾದ ಸರಿಯಾದ ಸೌಲಭ್ಯ ಗಳೇ ಇರುವುದಿಲ್ಲ ಇಂತಹ ವ್ಯವಸ್ಥೆಯಲ್ಲಿ ಶಿಕ್ಷಣ ಪಡೆದ ನಮ್ಮ ಮಕ್ಕಳು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಹಾಗೂ ಶಿಕ್ಷಣದ ಮೌಲ್ಯವನ್ನು ಹೆಚ್ಚಿಸಲು ಹೇಗೆ ಸಹಾಯಕವಾಗುತ್ತದೆ !?
ಗ್ರಾಮೀಣ ಪ್ರದೇಶದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ತಾವು ಮುಂದೆ ಏನಾಗಬೇಕು ? ಹಾಗೆ ಆಗಲು ಯಾವ ವಿಷಯವನ್ನು ಅಧ್ಯಯನ ಮಾಡಬೇಕೆಂದೇ ಗೊತ್ತಿಲ್ಲ ಮತ್ತು ಎಸ ಎಸ ಎಲ ಸಿ ಮುಗಿದ ನಂತರ ಯಾವ ಯಾವ ವಿಭಾಗಗಳಿವೆ ಅದರಲ್ಲಿ ಯಾವ ವಿಷಯವನ್ನು ಅಧ್ಯಯನ ಮಾಡಿದರೆ ಯಾವ ವೃತ್ತಿಗೆ ಹೋಗಬಹುದು ಎಂದೆ ಗೊತ್ತಿಲ್ಲ ! ಯಾರೋ ಒಬ್ಬರು ಈ ವಿಷಯ ತಗೋ ಕಲಿಯಲು ಸುಲುಭ ಎನ್ನುತ್ತಾರೆ ಅವನು ಅದನ್ನೇ ತೇಗೆದುಕೊಲ್ತಾನೆಅವನ ಅಸೆ ಆಕಾಂಕ್ಷೆಗಳಿಗೆ ಬೆಲೆಯೇ ಇಲ್ಲ.
ಉದಾ : ನಾನು ನನ್ನ ಎಸ ಎಸ ಎಲ ಸಿ ಉತ್ತಿರ್ಣ ಅದಾಗ ಮುಂದೆ ಕಾಲೇಜಿನಲ್ಲಿ ಯಾವ ಯಾವ ವಿಷಯಗಳಿವೆ ಎಂದೆ ತಿಳಿದಿರಲಿಲ್ಲ!! ಹೀಗಿರುವಾಗ ಶಿಕ್ಷಣದ ಗುಣಮಟ್ಟವನ್ನು ಉತ್ತಮ ಪಡಿಸುವುದಾದರೂ ಹೇಗೆ?
ಇನತಹ ಚಿಕ್ಕ ಪುಟ್ಟ ಮೂಲ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ಅವುಗಳನ್ನು ಸುಧಾರಿಸುವುದು ಕಷ್ಟದ ಕೆಲಸವೇನು ಅಲ್ಲ ಆದರೆ ಇದರ ಸುದಾರಣೆಗೆ ಕೆಳಗಿನ ಮಟ್ಟದಿಂದ ಕಾರ್ಯಕ್ರಮ ಹಮ್ಮಿಕೊಂಡು ಶಿಕ್ಷಕರಿಗೆ ಕಲಿಸುವ ಹಾಗೂ ತಾವೂ ಕಲಿಯುವ ಉತ್ಶಾಹವನ್ನು ಸೂಕ್ತವಾದ ತರಬೇತಿಮೂಲಕ ನೀಡಿದರೆ ಒಳ್ಳೆಯದು, ಇದರಿಂದ ಯುವ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ತಾನು ಏನಾಗಬೇಕು ? ಹಾಗೆ ಆಗಬೇಕಾದರೆ ಏನನ್ನು ಹೆಚ್ಚಾಗಿ ಅಭ್ಯಾಸ ಮಾಡಬೇಕು ಎಂದು ಅರಿವಾಗುತ್ತದೆ.
ಈ ರೀತಿಯ ವಿಚಿತ್ರವಾದ ಹಾಗೂ ವೈರುದ್ಯ ಗಳಿಂದ ಕೂಡಿದ ಈ ನಮ್ಮ ಸಮಾಜದಲ್ಲಿ ನಮ್ಮ ಯುವ ಪೀಳಿಗೆಗೆ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ದಾರಿಯೇ ಕಾಣದಾಗಿರುವ ಈ ಸಂದರ್ಭದಲ್ಲಿ ಇದರ ಬಗ್ಗೆ ಗಂಬೀರ ಚರ್ಚೆಯಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕರ , ಚಿಂತಕರ, ಶಿಕ್ಷಣ ತಜ್ನರ ಹಾಗೂ ಪಾಲಕರ ಕರ್ತವ್ಯವಾಗಿದೆ.

Saturday, September 19, 2009

ಮನದಾಳದ ಮಾತು